Kannada grammars questions And Answers For All Competitive Exams

Kannada grammars questions And Answers For All Competitive Exams

All Competitive Exams Questions And Answers, KPSC,KSP,KEA,KSRTC,BMTC,RAILWAYS,Etc, Kannada grammar.

ಕನ್ನಡವ್ಯಾಕರಣದ ಪ್ರಶ್ನೆಗಳು

ರನ್ನನ ಕುಲಕಸಬು ಯಾವುದು?
A. ಕಲ್ಲು ಒಡೆಯುವುದು
B. ವ್ಯಾಪಾರ ಮಾಡುವುದು
C. ಬಳೆ ಮಾರುವುದು
D. ಹಣ್ಣು ಮಾರುವುದು
C

ಇದು ಭವಿಷ್ಯತ್ ಕಾಲದ ವಾಕ್ಯ?
ಅ.ಮಕ್ಕಳು ಶಾಲೆಗೆ ಹೋಗುವರು
ಬ.ಮಕ್ಕಳು ಶಾಲೆಗೆ ಹೋದರು
ಕ. ಮಕ್ಕಳು ಶಾಲೆಗೆ ಹೋಗುವವರು
ಡ.ಮಕ್ಕಳು ಶಾಲೆಗೆ ಹೋಗರು
A

ಙ,ಞ,ಣ,ನ,ಮ ಅಕ್ಷರಗಳಿಗೆ ಈ ಹೆಸರಿದೆ?
ಅ.ಅಲ್ಪ ಪ್ರಾಣಗಳು
ಬ.ಅನುನಾಸಿಕಗಳು
ಕ.ಮಹಾಪ್ರಾಣಗಳು
ಡ.ಸಂಧ್ಯಾಕ್ಷರಗಳು.
B

‘ಅತ್ತಣಿಂ’ ಇದು ಯಾವ ವಿಭಕ್ತಿಗೆ ಉದಾಹರಣೆ——?
ಎ)ಷಷ್ಠಿ
ಬಿ)ಪಂಚಮಿ
ಸಿ)ಚತುಥಿ೯
ಡಿ)ದ್ವಿತಿಯಾ
B

‘ವಿದ್ಯುಲೇಪನ’ ಈ ಪದವನ್ನು ಬಿಡಿಸಿ ಬರೆದಾಗ——?
ಎ)ವಿದ್ಯುತ್ +ಲೇಪನ
ಬಿ)ವಿದ್ಯು+ಆಲೇಪನ
ಸಿ)ವಿದ್ಯುತ್+ ಉಲ್ಲೇಪನ
ಡಿ)ವಿದ್ಯು+ಲೇಪನ
A

ರಾಮನು ಮನೆಯಿಂದ ಹೊರಗೆ ಬಂದು ಕಾವೇರಿಯಲ್ಲಿ ಸ್ನಾನ ಮಾಡಿದ. ಈ ವಾಕ್ಯದಲ್ಲಿ ರೂಢನಾಮ ಯಾವುದು,?
ಎ)ರಾಮ
ಬಿ)ಮನೆ
ಸಿ)ಹೊರಗೆ
ಡಿ)ಸ್ನಾನ
B

ಈ ಕೆಳಗಿನ ಪದಗಳಲ್ಲಿ ಅನ್ವಥ೯ನಾಮ ಯಾವುದು?
ಎ)ಜಯಣ್ಣ
ಬಿ)ಪವ೯ತ
ಸಿ)ವಿದ್ವಾಂಸ
ಡಿ)ಭಾರತ
C

‘ಮುಖ್ಯೋಪಾಧ್ಯಾಯರು’ ತಮ್ಮ ಕಾಯ೯ವನ್ನು
ಯಶಸ್ವಿಯಾಗಿ ಪೂರೈಸಿದರು. ಈ ವಾಕ್ಯದಲ್ಲಿ ಆತ್ಮಾಥ೯ಕ ಸವ೯ನಾಮ——-?
ಎ)ಮುಖ್ಯೋಪಾಧ್ಯಾಯರು
ಬಿ)ತಮ್ಮ
ಸಿ)ಕಾಯ೯
ಡಿ)ಯಶಸ್ವಿ
B

‘ಪೆಮ೯ರ್’ ಎಂಬುದು—-?
ಎ)ಕ್ರಿಯಾ ಸಮಾಸ
ಬಿ)ದ್ವಿಗು ಸಮಾಸ
ಸಿ)ಕಮ೯ಧಾರೆಯ ಸಮಾಸ
ಡಿ)ತತ್ಪುರುಷ ಸಮಾಸ
C

“ತ,ಥ,ದ,ಧ,ಲ,ಸ” ಈ ವಣೋ೯ತ್ಪತ್ತಿಗಳ ಸ್ಥಾನ—-?
ಎ)ದಂತ್ಯ
ಬಿ)ತಾಲವ್ಯ
ಸಿ)ಕಂಠ
ಡಿ)ಅನುನಾಸಿಕ
A

ಗುರು ಶಬ್ಧದ ಸ್ತ್ರೀಲಿಂಗ?
ಎ)ಗುರಿ
ಬಿ)ಗುವ್ರ
ಸಿ)ಗುರುತ್ರಿ
ಡಿ)ಗುರ್ವೀ
D

ತಿರುಮಲೆ ರಾಜಮ್ಮನವರ ಕಾವ್ಯನಾಮ ಯಾವುದು?
A. ಪಾರ್ವತಿ
B. ಭಾವನಾ
C. ಚಂದನಾ
D. ಭಾರತಿ
D

ಕುಡುಕರ ಭಾಷೆಯಂತೆ ಕಾವ್ಯ ರಚಿಸಿದ ಕವಿ ಯಾರು?
A. ಅ.ನ.ಕೃ
B. ಜೆ.ಪಿ.ರಾಜರತ್ನಂ
C. ಬಿ.ಜಿ.ಎಲ್.ಸ್ವಾಮಿ
D. ರಾಶಿ
B

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂದು ಹೇಳಿದ ಕವಿ
A. ಕೆ.ಎಸ್.ನರಸಿಂಹಸ್ವಾಮಿ
B. ಚನ್ನವೀರ ಕಣವಿಯವರ
C. ತ.ರಾ.ಸು
D. ಡಿ.ವಿ.ಜಿ
D

ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದ ಕವಿ ಯಾರು ?
A. ಡಾ.ಡಿ.ಎಸ್.ಕರ್ಕಿ
B. ಈಶ್ವರ ಸಣಕಲ್ಲ
C. ಬಸವರಾಜ ಕಟ್ಟೀಮನಿ
D. ಬಸವರಾಜ ಬೆಟಗೇರಿ
B

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದ ದಾಸರು
A. ಕನಕದಾಸರು
B. ವ್ಯಾಸರಾಯರು
C. ತುಳಸಿದಾಸರು
D. ಪುರಂದರದಾಸರು
D

ಕನ್ನಡದಲ್ಲಿ ದ್ವಿವಚನವಿದೆ ಎಂದು ಹೇಳಿದ ಕವಿ
A. ರನ್ನ
B. ಕುವೆಂಪು
C. ತೀ.ನಂ.ಶ್ರೀ
D. ಕನಕದಾಸರು
C

ಹಸಿವಾದೊಡೆ ಕೆರೆ ಹಳ್ಳ ಭಾವಿಗಳುಂಟು ಎಂದು ಹೇಳಿದವರಾರು?
A. ಅಕ್ಕಮಹಾದೇವಿ
B. ಅಲ್ಲಮಪ್ರಭು
C. ಅಂಡಯ್ಯ
D. ಅತ್ತಿಮಬ್ಬೆ

ಕುಮಾರವ್ಯಾಸ ಭಾರತವು ಮೊದಲು ಎಷ್ಟು ಪರ್ವಗಳನ್ನು ಹೊಂದಿದೆ?
A. 5
B. 10
C. 15
D. 20
B

ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು? ಎಂದು ಹೇಳಿದ ಕವಿ?
A. ಬಸವಣ್ಣನವರು
B. ಕೆ.ಎಸ್.ನಿಸಾರ ಅಹಮದ್
C. ಕನಕದಾಸರು
D. ಸರ್ವಜ್ಞ
D

ಕರುಣಾಳು ಬಾ ಬೆಳಕೇ ಮುಸುಕಿದಿ ನೀ ಮಬ್ಬಿನಲಿ ಎಂದ ಕವಿ?
A. ಬಿ.ಎಂ.ಶ್ರೀ
B. ತಿ.ನಂ.ಶ್ರೀ
C. ಕೆ.ಎಸ್.ನರಸಿಂಹಸ್ವಾಮಿ
D. ಕುವೆಂಪು
A

ಪಾಂಚಾಲಿ ಇದು ಯಾರ ಹೆಸರು?
A. ಸೀತೆ
B. ಮಂಡೋದರಿ
C. ದ್ರೌಪದಿ
D. ಅಹಲ್ಯ
C

ಗೀಗೀ ಪದದ ಮೇಳದಲ್ಲಿ ಎಷ್ಟು ಜನ ಗಾಯಕರಿರುತ್ತಾರೆ?
A. ಎರಡರಿಂದ ಮೂರು
B. ಮೂರರಿಂದ ನಾಲ್ಕು
C. ನಾಲ್ಕರಿಂದ ಐದು
D. ಐದರಿಂದ ಆರು
B

ದುಶ್ಯಂತನು ಶಾಕುಂತಲೆಗೆ ನೀಡಿದ್ದ ಉಂಗುರವು ಯಾವ ಪ್ರಾಣಿಯ ಹೊಟ್ಟೆಯಲ್ಲಿ ದೊರಕಿತು?
A. ಮೀನು
B. ಸಿಂಹ
C. ಹುಲಿ
D. ಚಿರತೆ
A

ಕಣ್ವ ಮಹಾಮುನಿಗಳ ಸಾಕು ಮಗಳು ಯಾರು?
A. ರಾಧೆ
B. ಗಿರಿಜಾ
C. ದ್ರಾಕ್ಷಾಯಣಿ
D. ಶಕುಂತಲೆ
D

“ಚಾಡಿಕೋರ” ಎಂಬುದು —— ನಾಮ.
a) ತದ್ದಿತಾಂತ
b) ಕೃದಂತ
c) ಭಾವನಾಮ
d) ಕೃದಂತ ಭಾವ
A

ಹಗಲು ಕನಸು ಎಂಬುದು ಸಮಾಸ.
a) ಕರ್ಮಧಾರಯ
b) ಅಂಶಿ
c) ತತ್ಪುರುಷ
d) ದ್ವಿಗು
C

“ಕೆಳದುಟಿ” ಎಂಬುದು _ಸಮಾಸ.
a) ಅಂಶಿ
b) ದ್ವಂದ್ವ
c) ದ್ವಿಗು
d) ಕರ್ಮಧಾರೆಯ
A

“ಕಥೆಹೇಳು” ಎಂಬುದು _ ಸಮಾಸ.
a) ದ್ವಿಗು
b) ಬಹುವ್ರೀಹಿ
c) ಅಂಶಿ
d) ಕ್ರಿಯಾ
D

__ ಎಂಬುದು ಅವಧಾರಣೆಯಿಂದ ಕೂಡಿದ ಪದ.
a) ನಾನು
b) ನಾನೂ
c) ನಾನೇ
d) ನಾನೋ
C

ಆ ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೆ ಹಿಂತಿರುಗಿದೆನು ಇಲ್ಲಿ ಕೂಡಲೇ ಎಂಬುದು.
a) ಅನುಸರ್ಗಾವ್ಯಯ
b) ಸಾಮಾನ್ಯಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
B

ಆಹಾ, ನೀರು ಅಮೃತದಂತಿದೆ ಇಲ್ಲಿ ಆಹಾ ಎಂಬುದು?
a) ಸಾಮಾನ್ಯಾವ್ಯಯ
b) ಅನುಸರ್ಗಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
C

ಈ ವಾಕ್ಯದಲ್ಲಿ ಮಗು ಕುಣಿಯುತ್ತಾ ಬೀದಿಗೆ ಹೋಯಿತು. ಇಲ್ಲಿ ಕುಣಿಯುತ್ತಾ ——– ಪದ.
a) ನಾಮಪದ
b) ಕ್ರಿಯಾಪದ
c) ಸಾಪೇಕ್ಷ ಕ್ರಿಯಾಪದ
d) ನಾಮ ಪ್ರಕೃತಿ
C

ನೀವು ಬುದ್ದಿವಂತರಾಗಿ ಬಾಳಿ ಇಲ್ಲಿ “ಬುದ್ದಿವಂತರಾಗಿ” ಎಂಬುದು …
a) ನಾಮಪದ
b) ಕ್ರಿಯಾಪದ
c) ಕ್ರಿಯಾ ವಿಶೇಷಣ
d) ಭಾವನಾಮ
C

“ಅಂಥದು” ಎಂಬ ಪದ ವಾಚಕ.
a) ಸಂಖ್ಯಾವಾಚಕ
b) ಪರಿಮಾಣ ವಾಚಕ
c) ಪ್ರಕಾರ ವಾಚಕ
d) ದಿಗ್ವಾಚಕ
C

ಕೈಕಾಲು ಮೂಡಿತೋ ನಭಕೆ ಈ ವಾಕ್ಯದಲ್ಲಿರುವ ಅಲಂಕಾರ?
ಅ. ಉಪಮಾ
ಬ. ಉತ್ಪ್ರೇಕ್ಷೆ
ಕ. ಅರ್ಥಂತರನ್ಯಾಸ
ಡ. ದೃಷ್ಟಾಂತ
B

ಸರ್ವಜ್ಞನು ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧನಾಗಿದ್ದಾನೆ?
ಅ. ಷಟ್ಪದಿ
ಬ. ರಗಳೆ
ಕ. ದಾಸರಪದ
ಡ. ತ್ರಿಪದಿ
D

ಮೈಯೆಲ್ಲಾ ಕಣ್ಣಾಗಿ ಎಂದರೆ?
ಅ.ದೇಹದಲ್ಲೆಲ್ಲಾ ಕಣ್ಣು
ಬ.ಬಹಳ ನಿದ್ದೆಗೆಟ್ಟುಕೊಂಡು
ಕ.ತುಂಬಾ ಜಾಗರೂಕನಾಗಿರು
ಡ.ಬಹಳ ಧೈರ್ಯವಾಗಿರು
C

ಕನ್ನಡಿತಿ ಎಂಬಲ್ಲಿ ….ಸಂಧಿ ಇದೆ?
ಅ.ಆಗಮ
ಬ.ಆದೇಶ
ಕ.ಲೋಪ
ಡ.ಸವರ್ಣದೀರ್ಘ
C

ಮಂದಾನಿಲ ರಗಳೆಯ ಲಕ್ಷಣ?
ಅ. ನಾಲ್ಕು ಮಾತ್ರೆಯ ನಾಲ್ಕು ಗಣಗಳು
ಬ. ನಾಲ್ಕು ಮಾತ್ರೆಯ ಐದು ಗಣಗಳು
ಕ. ಮೂರು ಮಾತ್ರೆಯ ಎಂಟು ಗಣಗಳು
ಡ. ಐದು ಮಾತ್ರೆಯ ನಾಲ್ಕು ಗಣಗಳು
A

ಬಹುವ್ರೀಹಿ ಸಮಾಸಕ್ಕೆ ನಿದರ್ಶನ?
ಅ.ಮುಂಬಾಗಿಲು
ಬ.ಅರಮನೆ
ಕ. ಕೆಂದಾವರೆ
ಡ.ನಾಲ್ಮೊಗ
D

ಮುಮ್ಮಡಿ ರಚನೆಯಲ್ಲಿನ ಮೂರು ರೂಪ?
ಅ. ಸಂಬಂಧಸೂಚಕ ವಿಶೇಷಣ
ಬ. ಗುಣಾತ್ಮಕ ವಿಶೇಷಣ
ಕ. ಸಂಖ್ಯಾ ವಿಶೇಷಣ
ಡ. ಪರಿಮಾಣಾತ್ಮಕ ವಿಶೇಷಣ
C

ಕೂಸು ಮಲಗಿದೆ ಇದರಲ್ಲಿರುವ ಲಿಂಗ——?
ಎ)ನಪುಸಂಕಲಿಂಗ
ಬಿ)ಪುನ್ನಪುಂಸಕಲಿಂಗ
ಸಿ)ನಿತ್ಯ ನಪುಂಸಕಲಿಂಗ
ಡಿ)ಸತ್ಯ ನಪುಂಸಕಲಿಂಗ
C

DEATH CERTIFICATE ಸಂವಾದಿಯಾದ ಕನ್ನಡ ಶಬ್ಧ—-?
ಎ)ಮೃತಪತ್ರ
ಬಿ)ಮ್ರತ್ಯಪತ್ರ
ಸಿ)ಮೃತ್ಯುಪತ್ರ
ಡಿ)ಮ್ರತ್ಯು ಪತ್ರ
A

ಇದರಲ್ಲಿ ಯಾವುದು ಸರಿ,?
ಎ)ವಿವಿಧತಾ
ಬಿ)ವಿವಿಧತೆ
ಸಿ)ವೈವಿಧ್ಯ
ಡಿ)ವೈವಿಧ್ಯತೆ
D

ಪೂಜ್ಯ ಇದರ ವಿರುದ್ಧ ಪದ?
ಎ)ಭೋಜ್ಯ
ಬಿ)ತ್ಯಾಜ್ಯ
ಸಿ)ವಾಜ್ಯ
ಡಿ)ರಾಜ್ಯ
B

ಐಹಿಕ ಇದರ ವಿರುದ್ಧ ಪದ?
ಎ)ಪಾರಮಾಥಿ೯ಕ
ಬಿ)ಇಹಿಕ
ಸಿ)ಭೂಮಿ
ಡಿ)ಜಗತ್ತು
A

ಜಂಗಮ ಪದದ ವಿರುದ್ಧ ಪದ?
ಎ)ಬ್ರಾಹ್ಮಣ
ಬಿ)ದಲಿತ
ಸಿ)ಪಂಚಮ
ಡಿ)ಸ್ಥಾವರ
D

‘ಆಧ್ಯಾತ್ಮ’ ಸಂಧಿ ತಿಳಿಸಿ?
ಎ)ವೃದ್ಧಿಸಂಧಿ
ಬಿ)ಅನುನಾಸಿಕ ಸಂಧಿ
ಸಿ)ಶ್ಚುತ್ವಸಂಧಿ
ಡಿ)ಯಣ್ ಸಂಧಿ
D

Leave a Reply

Your email address will not be published. Required fields are marked *