ಕೆ ಎಸ್ ಆರ್ ಟಿ ಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ

KSRTC Exam Postponed 2018

ಪತ್ರಿಕಾ ಪ್ರಕಟಣೆ

ವಿಷಯ: ಆಗಸ್ಟ್‌ 2018, ದಿನಾಂಕ 25 ಮತ್ತು 26 ರಂದು ನಡೆಸಲು ಉದ್ದೇಶಿಸಿದ್ದ ಕೆ ಎಸ್ ಆರ್ ಟಿ ಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ.

ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಕರಾವಳಿ ಭಾಗ ಮತ್ತು ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿವೆ.
ಈ ಹಿನ್ನಲೆಯಲ್ಲಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪರೀಕ್ಷಾ ಅಭ್ಯರ್ಥಿಗಳು, ಕೆಎಸ್ಆರ್ ಟಿ ಸಿ ದಿನಾಂಕ 25 ಮತ್ತು 26 ಆಗಸ್ಟ್‌ 2018 ರಂದು  ನಡೆಸಲು ಉದ್ದೇಶಿಸಿದ್ದ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಸಲ್ಲಿಸಿರುತ್ತಾರೆ.
ಸದರಿ ಮನವಿಯನ್ನು ಪರಿಗಣಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಮಾನ್ಯ ಸಾರಿಗೆ ಸಚಿವರು ಉದ್ದೇಶಿತ ಲಿಖಿತ ಪರೀಕ್ಷಾ ದಿನಾಂಕವನ್ನು‌ ಮುಂದೂಡಲು ಸೂಚಿಸಿರುತ್ತಾರೆ. ಈ ಸಂಬಂಧ, ದಿನಾಂಕ 25 ಮತ್ತು 26 ರಂದು ನಡೆಯಬೇಕಾಗಿದ್ದ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಮುಂದಿನ ಪರೀಕ್ಷಾ ದಿನಾಂಕವನ್ನು
*ಕೆಎಸ್ ಆರ್ ಟಿ ಸಿ ವೆಬ್ ಸೈಟ್ www.ksrtcjobs.com ಮತ್ತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು*
ಸಹಿ/-
ವ್ಯವಸ್ಥಾಪಕ ನಿರ್ದೇಶಕರು
 

About Spardha1Rajendran

View all posts by Spardha1Rajendran →

Leave a Reply

Your email address will not be published. Required fields are marked *