ಡಿಜಿಟಲ್ ಪಾವತಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ಡಿಜಿಟಲ್ ಪಾವತಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ಡಿಜಿಟಲ್ ಪಾವತಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ದೊರೆತಿದೆ. ಮೊಬೈಲ್ ಮೂಲಕ ಇನ್ನೊಬ್ಬ ವ್ಯಕ್ತಿಗೆ ಡಿಜಿಟಲ್ ಹಣ ಪಾವತಿಸುವ ನಗರಗಳ ಪೈಕಿ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

2019ರಲ್ಲಿ ಈ ವಿಧಾನದ ಮೂಲಕ ಹಣ ಪಾವತಿ ಶೇ.40ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.ಅಮೆಜಾನ್ ಪೇ ಗ್ರಾಹಕರ ಅತಿ ಹೆಚ್ಚು ಆದ್ಯತೆಯ ಮೊಬೈಲ್ ವಾಲೆಟ್ ಎನಿಸಿಕೊಂಡಿದ್ದರೆ, ಓಲಾ ಮನಿ ನಂತರದ ಸ್ಥಾನದಲ್ಲಿದೆ.

ರೇಜರ್ ಪೇ ಎಂಬ ಪಾವತಿ ಸೇವಾ ಸಂಸ್ಥೆಯ ವರದಿ ಪ್ರಕಾರ, 2018ರಿಂದ 2019ರ ಅವಧಿಯಲ್ಲಿ ಡಿಜಿಟಲ್ ಪಾವತಿ ಶೇ.338 ರಷ್ಟು ಏರಿಕೆಯಾಗಿದೆ. ವಿಶೇಷವೆಂದರೆ ಕಾರ್ಡ್ ಪಾವತಿ 2018ರಲ್ಲಿ ಶೇ.56ರಿಂದ 2019ರಲ್ಲಿ ಶೇ.46ಕ್ಕೆ ಇಳಿಕೆ ಕಂಡಿದೆ. ಇಂಟರ್‌ನೆಟ್ ಬ್ಯಾಂಕಿಂಗ್ ಶೇ.23 ರಿಂದ ಶೇ.11ಕ್ಕೆ ಇಳಿಕೆಯಾಗಿದೆ.

Image result for Bangalore tops Digital Payment

ಇನ್ನೊಂದೆಡೆ ಯುಪಿಐ ಹಣ ಪಾವತಿ ವಿಧಾನ ಶೇ.17ರಿಂದ 38ಕ್ಕೆ ಏರಿಕೆಯಾಗಿದೆ. ಮೊಬೈಲ್ ಮೂಲಕ ಡಿಜಿಟಲ್ ಪಾವತಿಗೆ 2019ರಲ್ಲಿ ಶೇ.23ರಷ್ಟು ಕೊಡುಗೆ ನೀಡುತ್ತಿರುವ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *